Wednesday, September 17, 2008

ಸೈಕೊ (2008)

ಸೈಕೊ (2008) - ಈ ತನುವು ನಿನ್ನದೇ

ಇ ... ತನುವು ನಿನ್ನದೇ ನಿನ್ನಾಣೆ....
ಇ.... ಮನವು ನಿನ್ನದೇ ನಿನ್ನಾಣೆ
ಇ.. ಒಲವು ನಿನ್ನದೇ ನಿನ್ನಾಣೆ

ಇ.. ಉಸಿರು ನಿನ್ನದೇ ನಿನ್ನಾಣೆ
ನೀನೇನೆ ಅಂದರೂ ನೀ ನನ್ನ ಕೊಂದರು...
ಇ.. ಜೀವ ಹೋದರೂ.. ಪ್ರೇಮಿ ನೀನೆ
ನೀನೆ ಬೇಕು.. ನೀನೆ ಬೇಕು..
ನೀ ಇಲ್ಲದೆ ಯಾಕೀ ಬದುಕು?
ನೀನೆ ಬೇಕು.. ನೀನೆ ಬೇಕು..
ಇ... ಬಾಳಿಗೆ ನೀನೆ ಬೆಳಕು...

ಇ ... ತನುವು ನಿನ್ನದೇ ನಿನ್ನಾಣೆ....
ಇ.... ಮನವು ನಿನ್ನದೇ ನಿನ್ನಾಣೆ...
ಇ .. ಹೃದಯ ನಿನ್ನದೇ.. ನಿನ್ನಾಣೆ
ಇ.. ಜನುಮ ನಿನ್ನದೇ ನಿನ್ನಾಣೆ..


ನೀ ಶಾಪ ಕೊಟ್ಟರು..
ನಾ ನಾಶ ವಾದರೂ ..
ನೂರಾರು ಜನ್ಮಕು.. ಪ್ರೇಮಿ ನೀನೆ..
ನೀನೆ ಬೇಕು.. ನೀನೆ ಬೇಕು..
ನೀನಿಲ್ಲದೇ ಯಾಕೀ ಬದುಕು?
ನೀನೆ ಬೇಕು.. ನೀನೆ ಬೇಕು..
ನೀನಿಲ್ಲದೇ ಯಾಕೀ ಬದುಕು?

ನಾ ನಿನ್ನನು ನೋಡಿದ ಕೂಡಲೇ..
ಇ ಪ್ರೇಮವು ಮೂಡಿದೆ.....
ನೀ ನನ್ನನು ಪ್ರೀತಿಯ ಮಾಡದೇ....
ಈ ಜೀವವು ನಿಲ್ಲದೇ.....
ಇ... ರಕ್ತದ ಕಣ ಕಣದೀ .. ನೀ ಬೆರತು ಹೋಗಿಹೆ ನನ್ನಾಣೆಗೂ ಎಂದಿಗೂ

ನೀ ಇಲ್ಲದೆ ಏನೀ ಬದುಕು?

Friday, November 2, 2007

ಆ ದಿನಗಳು (2007)
ಸಾಹಿತ್ಯ : ಕೆ.ಕಲ್ಯಾಣ್
ಸಂಗೀತ : ಇಳಯರಾಜ
ಗಾಯನ : ಇಳಯರಾಜ ಮತ್ತು ನಂದಿತ
=========================


[ಗಂಡು] - ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ನ ನ ನ ನ ನ ನಾ ನ..
ನ ನ ನಾ ನ.....

ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ನೋಟವೊಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ
ಬರೆಯೋಣ ಬಾ

[ಹೆಣ್ಣು] - ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ

[ಗಂಡು] - ಬಾನಾಡಿಗೊಂದು ಸವಿ ಮಾತು ಕಲಿಸುವ

[ಹೆಣ್ಣು] - ಆ ವೀಣೆಗೊಂದು ಎದೆ ರಾಗ ತಿಳಿಸುವ

[ಗಂಡು] - ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ

[ಹೆಣ್ಣು] - ಅರಳುತಿರೊ ಹೂಗಳಿಗೆ ಒಲವ ಸುಧೆಯ ಕೋಡುವ

[ಗಂಡು] - ನಾ ನಾ ನ... ಬಾಳಿನ ಅರ್ಥವೆ ಪ್ರೇಮವೆಂಬುದಲ್ಲವೆ
ಪ್ರೇಮವೆ ಇಲ್ಲದೆ ನಾನು ನೀನು ಯಾಕೆ

[ಗಂಡು] - ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
[ಹೆಣ್ಣು] - ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ

[ಗಂಡು] - ನೋಟವೊಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ
ಬರೆಯೋಣ ಬಾ

[ಹೆಣ್ಣು] - ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
[ಗಂಡು] - ನ ನ ನ ನ ನ ನಾ ನ..
ನ ನ ನಾ ನ.....

Thursday, October 18, 2007

ಚಿತ್ರ: ಅನಂತನ ಅವಾಂತರ (1989)
ಸಾಹಿತ್ಯ : ಹಂಸಲೇಖ/ವಿ.ಮನೋಹರ್/ಉಪೇಂದ್ರ
ಸಂಗೀತ : ಹಂಸಲೇಖ
ಗಾಯನ : ರಾಜ್‍ಕುಮಾರ್ ಭಾರತಿ, ಕಾಶೀನಾಥ್, ಶಾಂತಮ್ಮ, ಎಂ.ಎನ್.ಲಕ್ಷ್ಮೀದೇವಿ, ಅರವಿಂದ್, ಸುಧೀಂದ್ರ ಇತರರು


[ಗಂಡು] : ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ಮದುವೆಯಾಗೊವರೆಗು ಈ ಹುಚ್ಚು ಹೋಗಲ್ಲ
ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೊಡಿ

ಹೀಗೇನೆ ಇರಬೇಕೆಂಬ ಕಾನೂನಿಲ್ಲ
ದುಡಿಯೋ ಹೆಣ್ಣೆ ಬೇಕು ಅನ್ನೋನಲ್ಲ
ರೂಪ ಇದ್ರೆ ಸಾಕು ರೂಪಾಯಿ ಕೇಳೋನಲ್ಲ
ನಡತೆ ಇದ್ರೆ ಸಾಕು ಈ ಅಡುಗೆ ನಡುಗೆ ನೋಡೊನಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೊಡಿ

[ಕೊರಸ್] : ಓ ಹು ಹೋ ಹು ಹೋ ಹು....

[ಗಂಡು] : ಯಾಕೆ ಮಿಸ್ ಏನಾದ್ರು ನೋವಾಯ್ತ
[ಕೊರಸ್] : ಏನ್ ಗುರು ಪಾರ್ವಾಳ ಸೆಟಾಯ್ತ
[ಗಂಡು] : ಹೇ ಹೋಗ್ರೋ ಲೋ ಕಾಲೇಜ್ ಗೆ ಹೊತ್ತಾಯ್ತು
[ಕೊರಸ್] : ನೀವು ಹೋಗೋದು ಮ್ಯಾಟ್ನೀಗೆ ಗೊತಾಯ್ತು
[ಹೆಣ್ಣು] : ದಯಮಾಡಿ ಮನೆ ತನಕ ಬಿಡ್ತೀರ
[ಕೊರಸ್] : ಆಹಾ ಯಾರಾದ್ರು ಇಂತ ಚಾನ್ಸು ಬಿಡ್ತಾರ

[ಹೆಣ್ಣು] : ಅಯ್ಯಯ್ಯೊ ಮೊಮ್ಮಗಳೆ ಎನಾಯ್ತು
[ಹೆಣ್ಣು] : ದಾರಿಲಿ ಆಕ್ಸಿಡೆಂಟ್ ಆಗೊಯ್ತು
[ಗಂಡು] : ಇವನೇನ ಇಂತ ಕೆಲಸ ಮಾಡಿದ್ದು
[ಹೆಣ್ಣು] : ಹಂಗಾದ್ರೆ ಎದ್ದೇಳ್ ಬಾರದು ಅಂಗುದ್ದು
[ಗಂಡು] : ಟಡಟಡ ಡಾಟಡ
ಟಡಟಡ ಡಾಟಡ ಯಾ ತಗೋ

[ಕೊರಸ್] : ಭೂಮಿಗೆ ಬಂದಂತ ಮೇನಕೆ
ಆಫೀಸ್ ಗೆ ಬಂದದ್ದು ಯಾತಕೆ
[ಹೆಣ್ಣು] : ಪ್ರೀತಿಯ ಫೈಲನ್ನ ತೋರ್ಸೊಕೆ
ಮುತ್ತಿನ ಸಹಿಯನ್ನ ಪಡೆಯೋಕೆ
[ಹೆಣ್ಣು ಮತ್ತು ಗಂಡು] : ಲಾ ಲ ಲ ಲಾ ಲ ಲ ಲ ಲ ಲಾ
[ಗಂಡು] : ಅಯ್ಯೊ ಆಫೀಸೆ ಕಬ್ಬಿನಂಗಡಿ ಆಗೊಯ್ತ

[ಹೆಣ್ಣು] : ಎನಪ್ಪ ನಿನ್ ಕತೆ ಏನಪ್ಪ
[ಗಂಡು] : ಎನಪ್ಪ ನಿನ್ ಕತೆ ಏನಪ್ಪ
[ಹೆಣ್ಣು] : ನಿನ್ಗ್ಯಾಕೋ ಬಂತು ಇಂತ ಕೆಟ್ ಬುದ್ದಿ
[ಗಂಡು] : ನಿನ್ಗ್ಯಾಕೋ ಬಂತು ಇಂತ ಕೆಟ್ ಬುದ್ದಿ
[ಹೆಣ್ಣು] : ಟೈಪಿಸ್ಟು ಬಂದ್ಲಂತೆ ನಿನ್ ಪಕ್ದಲ್ ನಿಂತಳಂತೆ
ಮೈಮೇಲೆ ಬಿದ್ಲಂತೆ ಏನೇನೋ ಕೊಟ್ಳಂತೆ
[ಗಂಡು] : ನನ್ನ ಮುದ್ದು ಅಮ್ಮ ತಲೆ ಕೆಡಸಿಕೊಳ್ಳಬೇಡ
ನಾನು ನೋಡೊ ಹೆಣ್ಣ ನೀ ಬೇಡ ಅನ್ನ ಬೇಡ ತಾಯಿ
ಜೋಡಿ ಜೋಡಿ ತರ್ತೀನಿ ಒಳ್ಳೆ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೋಡಿ

[ಕೊರಸ್] : ಮೇರೆ ಸಪುನೊಂಕಿ ರಾಣಿ ಕಬ್ ಆಯೆಗಿ ತು
ಈ ಆಂಜನೇಯನ್ ದೇವೆಸ್ತಾನ ಲಾಲ್ ಬಾಗ್ ಆಯ್ತು
ಇಲ್ಲಿ ಹುಡುಗ ಹುಡುಗಿ ಸೇರೋದ್ ನೊಡಿ ಸಾಕಾಗ್ ಹೋಯ್ತು
ಮಾರುತಿ ಏನು ಮಾರುತಿ
ನೋಡುತಿ ಸುಮ್ನೆ ಕೂರುತಿ

[ಗಂಡು] : ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
[ಹೆಣ್ಣು] : ಮದುವೆಯಾಗೊವರೆಗು ಈ ಹುಚ್ಚು ಹೋಗಲ್ಲ
[ಗಂಡು] : ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ
ಬಾರೆ ಅಮ್ಮ ನನ್ ಜೋಡಿ ನಾಳೆ ನೋಡು
ಮುಂದೆ ನಿಂತು ಮದುವೆಯ ನಿಶ್ಚಯ ಮಾಡು

[ಹೆಣ್ಣು] : ಯಜಮಾನ ಏನಿದು ಅವಮಾನ
[ಗಂಡು] : ಯಜಮಾನಿ ನನಗೊಂದು ಅನುಮಾನ
[ಹೆಣ್ಣು] : ಅದು ಯಾವ ರಾಗ ಆಡಿ ಬೇಗ
[ಗಂಡು] : ನಿಶ್ಚಿತಾರ್ಥ ಈಗ ನಿಮ್ ಅಮ್ಮಂಗ

[ಹೆಣ್ಣು] : ಮೇನಕೆ ಮೇನಕೆ ಮೇನಕೆ ಹೋ
[ಹೆಣ್ಣು] : ಇವರದ್ಯಾವ ಕುಲ ಗೋತ್ರ ತಿಳ್ಕೊಂಡ್ಯೆನೋ
[ಗಂಡು] : ಜಾತಿ ಗೀತಿ ಕುಲ ಗೋತ್ರ ಇನ್ಮೇಲ್ ನೊ ನೊ
[ಗಂಡು] : ಹುಡುಗಿ ಬರ್ತಾ ಇದೆ
[ಹೆಣ್ಣು] : ಏನೊ ಏನೊ ಏನೊ ಇದು ಒಳ್ಳೆ ಜೋಡಿನೇನೊ
[ಗಂಡು] : ಹುಡುಗಿ ಬರ್ತಾ ಇದೆ
[ಹೆಣ್ಣು] : ಅಯ್ಯೊ ರಾಮ ಕೃಷ್ಣ ಇದು ಎಂತ ಕರ್ಮನೋ
[ಗಂಡು] : ಹುಡುಗಿ ಬರ್ತಾ ಇದೆ

[ಹೆಣ್ಣು] : ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ದುಡ್ಡು ಕಾಸು ಖರ್ಚು ಏನೇನು ಬೇಡ ಬೇಡ
[ಗಂಡು] : ಛತ್ರ ಚಪ್ಪರ ಊಟ ಆ ಡಂಭಾಚಾರ ಬೇಡ ಬೇಡ

[ಕೊರಸ್] : ಸಿಂಪಲ್ಲಾಗಿ ಮದುವೆಯ ಮಾಡಿ ನೊಡಿ
ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ
ಸಿಂಪಲ್ಲಾಗಿ ಮದುವೆಯ ಮಾಡಿ ನೊಡಿ
ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ

ಚಿತ್ರ: ಅಭಿ
ಹಾಡಿರುವವರು: ಉದಿತ್ ನಾರಾಯಣ್, ಮಹಾಲಕ್ಷ್ಮಿ ಅಯ್ಯರ್
ಸಾಹಿತ್ಯ: ಕೆ.ಕಲ್ಯಾಣ್
ಸಂಗೀತ: ಗುರುಕಿರಣ್


ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೇ
ಈ ಪ್ರೀತಿ, ನೀ ನನ್ನ ಪ್ರಾಣ ಕಣೆ

ನಂಗು ನಿಂಗು ಇನ್ನು ಹೊಸದು ಇಂಥ ಅನುಭವ
ಕಂಡು ಕಂಡು ಎದೆಯ ಒಳಗೆ ಏನೊ ಕಲರವ
ಸದಾ ಸದಾ ವಯ್ಯಾರದ ಪದ ಪದ ಬೆಸೆದಿದೆ
ಹೊಸ ಹೊಸ ಶೃಂಗಾರದ ರಸ ರಾಗ ಲಹರಿಯ ಹರಿಸುತ್ತಿದೆ
ಓ ಒಲವೆ ಒಲವೆಂಬ ಒಲವೆನ್ನಿರಿ
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೇ

ಪ್ರೀತಿ ಒಂದು ಗಾಳಿಯ ಹಾಗೆ ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ ನಿಂತ ನೀರಲ್ಲ
ಅದು ಒಂದು ಜ್ಯೋತಿಯ ಹಾಗೆ ಸುಡೋ ಸುಡೋ ಬೆಂಕಿಯಲ್ಲ
ಅದು ಒಂದು ಭುವಿಯ ಹಾಗೆ ನಿರಂತರ ಈ ಪ್ರೇಮ ಸ್ವರ
ಈ ಪ್ರೀತಿ ಆಕಾಶಕೂ ಎತ್ತರ
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೇ

ಅಮೃತವರ್ಷಿಣಿ (1996)

ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ||೨||
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು

ಗಗನದ ಸೂರ್ಯ ಮನೆಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ, ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ, ಅಲ್ಲಿ ನನ್ನ ಇಂಚರ ಅಮರ

ಚೆಲುವನೆ ನಿನ್ನ ಮುಗುಳುನಗೆ ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೊ ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮವೆ
ನನ್ನ ಎದೆಯಾಳೊ ಧಣಿ ನೀನೆ, ನಿನ್ನ ಸಹಚಾರಿಣಿ ನಾನೆ

ಅಮೇರಿಕಾ! ಅಮೇರಿಕಾ!! (1997)
ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮೂರ್ತಿ
ಹಾಡಿದವರು : ರಾಜೇಶ್, ಸಂಗೀತ


ನೂರೂ ಜನ್ಮಕೂ...
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ
ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...

ಬಾಳೆಂದರೇ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ
ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ

ನೂರೂ ಜನ್ಮಕೂ...

ಬಾ ಸಂಪಿಗೆ ಸವಿಭಾವಲಹರೀ ಹರಿಯೇ
ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ
ಲೋಕದಾ ಸುಖವೆಲ್ಲಾ
ನಿನಗಾಗಿ ಮುಡಿಪಿರಲೀ
ಇರುವಂಥ ನೂರು ಕಹೀ
ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ

ನೂರೂ ಜನ್ಮಕೂ...


ಅರಸು(2007)
ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ರಾಮ್ ನಾರಾಯಣ್
ಗಾಯನ : ಮಹಾಲಕ್ಷ್ಮಿ ಐಯ್ಯರ್



ಹೆಣ್ಣು : ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಬಾಳಲಿ ಹೊಂಬೆಳಕಿನ ಹೊಸ ಭಾವನೆ ತಂದೆ
ನನ ಈ ಬದುಕಲಿ ಹೊಸ ಪ್ರೀತಿಯ ಕಂಡೆ ಕಂಡೆ
ಈ ಜೀವವ ಸಂತೈಸಲು ಉಸಿರಾಗಿ ನೀ ಬಂದಾಗ
ನನ ಈ ಜೀವನ ಹಸಿರಾಯಿತು ಇಂದೆ ಇಂದೆ
ಕಣ್ಣೋಟ ಬೆರೆತಾಗ ನೀನಿಂತೆ ಮನದಲ್ಲಿ
ತುಟಿಯಲ್ಲಿ ನಗೆಯೊಂದ ಚೆಲ್ಲಿ ಚೆಲ್ಲಿ
ಈ ಮೌನ ಮಾತಾಗಿದೆ ಮಾತೆಲ್ಲಾ ಹಾಡಾಗಿದೆ
ಇಂಪಾದ ಹಾಡಲ್ಲಿ ನಾ ತೇಲಿ ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಚಂದ್ರನು ಬಾನಿಂದಲಿ ನನಗಾಗಿಯೇ ಬಂದ
ಮನ ತಂಪಾಗಲು ತಂಗಾಳಿಯ ತಂದ ತಂದ
ಅಪರೂಪದ ಅನುರಾಗದ ಆನಂದವು ನೀನಾದೆ
ನನ ಜೊತೆಯಾಗಲು ಮಿಂಚಂತೆ ನೀ ಬಂದೆ ಬಂದೆ
ನಲಿದಾಡಿತು ಈ ಮನಸು ಹೊಸಲೋಕ ಕಂಡಂತೆ
ನಿನಗಿಂದು ನಾ ಸೋತು ಹೋದೆ
ಈ ಸ್ನೇಹ ಎಲ್ಲಾಯ್ತೊ ಈ ಪ್ರೀತಿ ಹೇಗಾಯ್ತೊ
ನಿನ್ನಲ್ಲಿ ನನ್ನನ್ನು ನಾ ಮರೆತು ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ

Friday, August 24, 2007

ಚಿತ್ರ : ಗೀತಾ
ಸಾಹಿತ್ಯ :
ಚಿ.ಉದಯಶಂಕರ್
ಸಂಗೀತ : ಇಳಯ ರಾಜ
ಗಾಯನ : ಎಸ್. ಪಿ. ಬಾಲ ಸುಬ್ರಮಣ್ಯಂ, ಎಸ್. ಜಾನಕಿ

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದುಹೊಸ ಹರುಷವ ತರುವೆನು ಇನ್ನೂ ಎಂದು.ಓ ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೇ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು..

ಪ್ರೀತಿಯೆಂದರೇನು ಎಂದು ಈಗ ಅರಿತೆನು (೨)ಸವಿನುಡಿಯಲಿ ತನುವರಳಿತು, ಸವಿಗನಸಲಿ ಮನ ಕುಣಿಯಿತುಒಲವಿನ ಈ ಮಾತಿಗೆ, ಕರದಿಹ ಈ ನೋಟಕೆಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ.
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು..

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ (೨)ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವಕಾಮನ ಬಿಲ್ಲೇರುವ, ಜಾರುತಾ ನಾವಾಡುವಹಗಲು ಇರುಳು ಒಂದಾಗಿ ಹಾಡುವ.
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು..

ಚಿತ್ರ : ಅಮೃತಧಾರೆ
ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ
ಸಂಗೀತ : ಮನೋಮೂರ್ತಿ
ಗಾಯನ : ಹರೀಶ್ ರಾಘವೇಂದ್ರ, ಸುಪ್ರಿಯ ಆಚಾರ್ಯ

ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?....
ಹೇ! ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರಹೇ! ಪ್ರೀತಿ ಹುಡುಗ ನನ್ನ ಬಾಳ ಕಥೆಗಾರನೀ ಇಲ್ಲವಾದರೆ ನಾ ಹೇಗೆ ಬಾಳಲೀ?ಹೇ! ಪ್ರೀತಿ ಹುಡುಗಾ...
ನೆನಪಿದೆಯೆ ಮೊದಲ ನೋಟ?ನೆನಪಿದೆಯೆ ಮೊದಲ ಸ್ಪರ್ಶ?ನೆನಪಿದೆಯೆ ಮತ್ತನು ತಂದ ಆ ಮೊದಲ ಚುಂಬನಾ?
ನೆನಪಿದೆಯೆ ಮೊದಲ ಕನಸು?ನೆನಪಿದೆಯೆ ಮೊದಲ ಮುನಿಸೂ?ನೆನಪಿದೆಯೆ ಕಂಬನಿ ತುಂಬಿ-ನೀನಿಟ್ಟ ಸಾಂತ್ವನ?
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?
ನೀ ಅಮೃತಧಾರೆ, ಕೋಟಿ ಜನುಮ ಜೊತೆಗಾತೀನೀ ಅಮೃತಧಾರೆ, ಇಹಕು ಪರಕು ಸಂಗಾತಿನೀ ಅಮೃತಧಾರೆ ..
ನೆನಪಿದೆಯೆ ಮೊದಲ ಸರಸ?
ನೆನಪಿದೆಯೆ ಮೊದಲ ವಿರಸಾ..?ನೆನಪಿದೆಯೆ ಮೊದಲು ತಂದ ಸಂಭ್ರಮದ ಕಾಣಿಕೆ?
ನೆನಪಿದೆಯೆ ಮೊದಲ ಕವನ?ನೆನಪಿದೆಯೆ ಮೊದಲ ಪಯಣಾ?ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ?ನೀ ಇಲ್ಲವಾದರೆ ನಾ ಹೆಗೆ ಬಾಳಲೀ?
ಹೇ! ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರನೀ ಅಮೃತಧಾರೆ ಇಹಕು ಪರಕು ಸಂಗಾತಿನೀ ಇಲ್ಲವಾದರೆ ನಾ ಹೇಗೆ ಬಾಳಲೀ?ನೀ ಅಮೃತಧಾರೆ!


ಚಿತ್ರ : ಜೊತೆ ಜೊತೆಯಲಿ
ಸಾಹಿತ್ಯ : ವಿ. ನಾಗೇಂದ್ರ ಪ್ರಸಾದ
ಸಂಗೀತ : ಹರಿಕೃಷ್ಣಗಾಯನ: ರಾಜೇಶ್ ಕೃಷ್ನನ

ಸೂರ್ಯ ಕಣ್ಣು ಹೊಡ್ದಕೈಲಿ ರೋಜ ಹಿಡಿದ'ಹೆಸ್ರು ಏನೆ?' ಅಂದನನ್ ಹುಡುಗೀನ್ ನೋಡಿಚಂದ್ರ ಕೈಯ್ಯ ಹಿಡಿದಪ್ರೀತಿ ಮಾಡೆ ಅಂದಇವ್ಳಾ ಹಿಂದೆ ಓಡ್ದಆಕಾಶ ಖಾಲಿಓ ಓ ಓ ಓ ಓ!
ನನ್ನ ಹುಡುಗಿ ಜಾನಪದಸಾದಾ ಸೀದಾ ಹಳ್ಳಿ ನಾದನನ್ನ ಹುಡುಗಿ ಜೀವಪದಬದುಕೊ ಕನಸೆ ಇವಳಿಂದತೆಗೆದೆ ಬಿಟ್ಲು ಮಳ್ಳಿ ಪ್ರೀತಿಯ ಕದನ
ಸೂರ್ಯ ಕಣ್ಣು ಹೊಡ್ದಕೈಲಿ ರೋಜ ಹಿಡಿದ'ಹೆಸ್ರು ಎನೆ?' ಅಂದನನ್ ಹುಡುಗೀನ್ ನೋಡಿಓ ಓ ಓ ಓ!
I Love You ೧೬
ನಿನ್ನ ಅಂದಕಂಡು ಕಂದ'ಆ ಬೊಂಬೆ ಬೆಕು' ಅಂದ'ಭೂಮಿಗ್ಯಾಕೆ ಇಳಿದಳೀಕೆ?'ಅಂತ ಇಂದ್ರ ನೊಂದಚಿನ್ನಾ!.. ನಿನ್ನಾ!..ನಿನ್ನಾ ನೋಡೊ ಆಸೆನೋಡಿ ಹಾಡಿ ಆಸೆಹಾಡಿ ಕೂಡಿ ಮುದ್ದಾಡೊ ಆಸೆ.. ಆಸೆ
ನನ್ನ ಹುಡುಗಿ ತಂಗಾಳಿಅವಳೆ ಇರದೆ ನಾನು ಖಾಲಿನನ್ನ ಹುಡುಗಿ ಸುವ್ವಾಲಿಸುವ್ವಿ ಹಾಡು ಮಾತಲ್ಲಿಇವಳು ನಕ್ಕ್ರೆ ಸಕ್ಕ್ರೆ ಚಲ್ಲುತ್ತೆ ಇಲ್ಲಿ!
ದೀಪವಿರದ ಲೋಕದಲ್ಲಿ ಇವಳ ಕಣ್ಣೆ ಬೆಳಕುನಾದವಿರದ ನಾಡಿನಲ್ಲಿ ಇವಳ ಉಸಿರೆ ಪಲುಕುಅಂದಾ!.. ಚಂದಾ!..ಸಾರಾ ಕೇಳಲಂತ..ಸಾರು ಕಟ್ಟಿನಿಂತಇಡಿ ಸೃಷ್ಟಿ ಕಂಡಾಗ..?
ನನ್ನ ಹುಡುಗಿ ಕನ್ನಡತಿಸಹನೆ, ಕರುಣೆ ಇವಳ ನೀತಿನನ್ನ ಹುಡುಗಿ ಪ್ರಾಣಸಖಿಪ್ರಣಯ ಇವಳ ಕಿವಿ ಜುಮುಕಿಲ ಲ ಲ ಲಾ ಲಾ
ಸೂರ್ಯ ಕಣ್ಣು ಹೊಡ್ದಕೈಲಿ ರೋಜ ಹಿಡಿದ'ಹೆಸ್ರು ಏನೆ?' ಅಂದನನ್ ಹುಡುಗೀನ್ ನೋಡಿಚಂದ್ರ ಕೈಯ್ಯ ಹಿಡಿದಪ್ರೀತಿ ಮಾಡೆ ಅಂದಇವ್ಳಾ ಹಿಂದೆ ಓಡ್ದಆಕಾಶ ಖಾಲಿಓ ಓ ಓ ಓ ಓ!

ಚಿತ್ರ : ಮುಂಗಾರು ಮಳೆ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಸಂಗೀತ : ಮಾನೋ ಮೂರ್ತಿ
ಗಾಯನ : ಸೋನು ನಿಗಮ

ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದುಮಾಯದ ಲೋಕದಿಂದ ನನಗಾಗಿ ಬಂದವಳೆಂದು, ಆಹಾ ಎಂಥ ಮಧುರ ಯಾತನೆಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ ಅನಿಸುತಿದೆಸುರಿಯುವ ಸೋನೆಯು ಸೂಸಿದೆ ನಿನ್ನದೆ ಪರಿಮಳಇನ್ಯಾರ ಕನಸಲು ನೀನು ಹೋದರೆ ತಳಮಳಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣನಾ ಖೈದಿ ನೀನೆ ಸೆರೆಮನೆ,ತಬ್ಬಿ ನನ್ನ ಅಪ್ಪಿಕೊ ಒಮ್ಮೆ ಹಾಗೆ ಸುಮ್ಮನೆ ಅನಿಸುತಿದೆತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆಮನಸಿನ ಪುಟದಲಿ ಕೇವಲ ನಿನ್ನದೆ ಸಹಿಯಿದೆಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆನಿನಗುಂಟೆ ಇದರ ಕಲ್ಪನೆ,ನನ್ನ ಹೆಸರ ಕೂಗೆ ಒಮ್ಮೆ, ಹಾಗೆ ಸುಮ್ಮನೆ ಅನಿಸುತಿದೆ

ಚಿತ್ರ : ಸೇವಂತಿ ಸೇವಂತಿ
ಸಾಹಿತ್ಯ :ಎಸ್.ನಾರಾಯಣ
ಸಂಗೀತ : ಎಸ್.ಎ.ರಾಜಕುಮಾರ
ಗಾಯನ : ವಿಜಯ್ ರಾಘವೇಂದ್ರ, ಶ್ರೇಯ ಘೋಶಾಲ

ಜಾಜೀ ಮಲ್ಲಿಗೆ ನೋಡೆಸೋಜುಗದ ಹೂವೆ ನೋಡೆ ೨ಎನ್ನಾ ಮ್ಯಾಲೆ ಮುನಿವಾರೆಜಾಜೀ ಮಲ್ಲಿಗೆ ನೋಡೆಸೋಜುಗದ ಹೂವೆ ನೋಡೆಎನ್ನಾ ಮ್ಯಾಲೆ ಮುನಿವಾರೆ
ಕಮಲದ ಹೂ ನಿನ್ನ ಕಾಣದೆ ಇರಲಾರೆಮಲ್ಲಿಗೆ ಮಾಯೆ ಒ ಒ ಓಕೇದಿಗೆ ಗರಿ ನಿನ್ನ ಅಗಲಿರಲಾರೆಮಲ್ಲಿಗೆ ಮಾಯೆ ಒ ಒ ಓ
ಜಾಜೀ ಮಲ್ಲಿಗೆ ನೋಡೆಸೋಜುಗದ ಹೂವೆ ನೋಡೆಎನ್ನಾ ಮ್ಯಾಲೆ ಮುನಿವಾರೆ
ಕೆನ್ನೆ ಕಸ್ತುರಿ ಬಾಲೆರಾಮ ಲಕುಮಿ ಮೇಲೆಮಾರುದ್ದ ಜಡೆಯೋಳೆಬಿಸ್ತರದ ಹೆಣ್ಣೆ ೨
ಎಳ್ಳು ಹೂವಿನ ಸೀರೆಬೆಳ್ಳಿ ಕಾಲುಂಗೂರಹಳ್ಳದ ನೀರು ತರುತ್ತಾಳೆ ನನ ಗೆಳತಿಬಣ್ಣದ ಬಾಲೆ ನೀ ಹೇಳೆಎನ್ನ ಮ್ಯಾಲೆ ಮುರಿವಾರೆ
ಜಾಜೀ ಮಲ್ಲಿಗೆ ನೋಡೆಸೋಜುಗದ ಹೂವೆ ನೋಡೆಎನ್ನಾ ಮ್ಯಾಲೆ ಮುನಿವಾರೆ
ಕೋಗಿಲೆ ದನಿಚಂದನಾಗರ ಹೆಡೆ ಚಂದದೇವಲೋಕದ ಪದುಮಿನಿ ನೀನು
ಮುನಸೆಲ್ಲಾ ನನ ಗೆಳೆಯಕನಸಲ್ಲಾ ನಂಬು ನನ್ನಚೆನ್ನಾದ ಚಲುವ ನೀ ಕೇಳೊಹಣ್ಣು ಹೋಳಿಗೆ ತುಪ್ಪಾ.. ಅಡಿಗೆಯ ನಾ ಮಾಡಿಬತ್ತೀ ನೀ ನಿತ್ತ ಗುರುತೀಗೆಬತ್ತಿ ನೀ ಜಾಣಬರುವ ದಾರಿ ಕಾಯೊಎನ್ನಾ ಮ್ಯಾಲೆ ಮುನಿವಾರೆ
ಜಾಜೀ ಮಲ್ಲಿಗೆ ನೋಡೆಸೋಜುಗದ ಹೂವೆ ನೋಡೆಎನ್ನಾ ಮ್ಯಾಲೆ ಮುನಿವಾರೆ
ಕಮಲದ ಹೂ ನಿನ್ನ ಕಾಣದೆ ಇರಲಾರೆಮಲ್ಲಿಗೆ ಮಾಯೆ ಒ ಒ ಓಕೇದಿಗೆ ಗರಿ ನಿನ್ನ ಅಗಲಿರಲಾರೆಮಲ್ಲಿಗೆ ಮಾಯೆ ಒ ಒ ಓ
ಜಾಜೀ ಮಲ್ಲಿಗೆ ನೋಡೆಸೋಜುಗದ ಹೂವೆ ನೋಡೆಎನ್ನಾ ಮ್ಯಾಲೆ ಮುನಿವಾರೆ..

ಚಿತ್ರ : ಮಿಲನ
ಸಾಹಿತ್ಯ : ಜಯಂತ್ ಕಾಯ್ಕಿಣಿ

ಸಂಗೀತ : ಮಾನೋ ಮೂರ್ತಿ
ಗಾಯನ : ಸೋನು ನಿಗಮ


ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ, ನಿನ್ನಿಂದಲೇ ನಿನ್ನಿಂದಲೇ ಮನಸ್ಸಿಂದು ಕುಣಿದಾಡಿದೆ.
ಈ ಎದೆಯಲ್ಲಿ ಸಿಹಿಯಾದ ಕೊಲಾಹಲಾ, ನನ್ನ ಎದುರಲ್ಲೇ ನಿ ಹೀಗೆ ಬಂದಾಗಲೇ. ನಿನ್ನ ತುಟಿಯಲ್ಲಿ ನಗು ಆಗುವ ಹಂಬಲಾ, ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ.

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ, ನಿನ್ನಿಂದಲೇ ನಿನ್ನಿಂದಲೇ ಮನಸ್ಸಿಂದು ಕುಣಿದಾಡಿದೆ.

ಇರುಳಲ್ಲಿ ಜ್ವರದಂತೆ ಕಾಡಿ ಇಗಾ ಹಾಯಾಗಿ ನಿಂತಿರುವೇ ಸರಿ ಎನು?..ಬೇಕಂತಲೆ ಮಾಡಿಯೇ ಎನೊ ಮೋಡಿ ಇನ್ನೆಲ್ಲೊ ನೋಡುವ ಪರಿ ಎನು. ಇ ಮಾಯೆಗೆ, ಇ ಮರುಳಿಗೆ ನಿನ್ನಿಂದ ಕಳೆ ಬಂದಿದೆ. ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ.

ಹೊದಲ್ಲಿ ಬಂದಲ್ಲಿ ಎಲ್ಲಾ ನಿನ್ನಾ ಸೊಂಪಾದ ಚೆಲುವಿನ ಗುಣಗಾನಾ, ಕೇದಿಗೆ ಗರಿಯಂತಾ ನಿನ್ನಾ ನೋಟ ನನಗೇನೊ ಅಂದಂತೆ ಅನುಮಾನಾ. ನಿನ್ನಿಂದಲೇ ಸದ್ದಿಲ್ಲದೇ ಮುದ್ದಾದ ಕರೆ ಬಂದಿದೆ. ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ.
ಈ ಎದೆಯಲ್ಲಿ ಸಿಹಿಯಾದ ಕೊಲಾಹಲಾ, ನನ್ನ ಎದುರಲ್ಲೇ ನಿ ಹೀಗೆ ಬಂದಾಗಲೇ. ನಿನ್ನ ತುಟಿಯಲ್ಲಿ ನಗು ಆಗುವ ಹಂಬಲಾ, ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ.


ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ, ನಿನ್ನಿಂದಲೇ ನಿನ್ನಿಂದಲೇ ಮನಸ್ಸಿಂದು ಕುಣಿದಾಡಿದೆ.

ಚಿತ್ರ : ಮೈ ಆಟೋಗ್ರಾಫ್ (2006)
ಸಾಹಿತ್ಯ :
ಸಂಗೀತ :
ಗಾಯನ :


ಅರಳುವ ಹುವೂಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ
ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನೀ ಅಳುಕದಿರು, ಮಳೆಯೋ ಬರಸಿಡಿಲೋ ನೀ ನಡೆಯುತಿರು.

ಮನಸುಯೆಂಬ ಕನ್ನಡಿಯು ಹೊಡೆದು ಹೋಗಬಾರದು, ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು
ಯಾರಿಗಿಲ್ಲಿ ನೋವಿಲ್ಲಾ? ಯಾರಿಗಿಲ್ಲಿ ಸಾವಿಲ್ಲಾ?, ಕಾಲಕಳೆದ ಹಾಗೆ ಎಲ್ಲಾ ಮಾಯವಾಗುವಂತದು
ಉಳಿಪೆಟ್ಟು ಬೀಳುವಕಲ್ಲೇ ಶಿಲೆಯಾಗಿ ನಿಲ್ಲುವುದು, ದಿನನೋವ ನುಂಗುವ ಜೀವವೇ ನೆಲೆಯಾಗಿ ನಿಲ್ಲುವುದು
ಯಾರಿಗಿಲ್ಲ ಅಲೆದಾಟ ? ಯಾರಿಗಿಲ್ಲ ಪರದಾಟ ? ನಮ್ಮ ಪ್ರತಿಕನಸು ಇಲ್ಲಿ ನನಸಾಗೋ ಒಳ್ಳೇ ಕಾಲವು ಮುಂದೆ ಇದೆ
ಮನವೇ ಓ ಮನವೇ ನೀ ಕುಗ್ಗದಿರು ಬೆಟ್ಟ ಬಯಲಿರಲಿ ನೀ ನುಗ್ಗುತಿರು.

ಅರಳುವ ಹುವೂಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ

ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು, ನಡುವೆ ನಮ್ಮದೀ ಪಯಣ, ನಗುತ ಸಾಗು ಹಗಲಿರುಳು
ಏನೇ ಬರಲಿ ಬಾಳಿನಲಿ ಧ್ಯೇಯವೊಂದು ಜೊತೆಯಿರಲಿ, ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು
ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ, ನಾವೆಲ್ಲರು ಎಂದು ಒಂದೆ ಆ ದೇವರ ಸೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ
ಮನವೇ ಓ ಮನವೇ ನೀ ಬದಲಾಗು, ಏನೇ ಸಾಧನೆಗೂ ನೀ ಮೊದಲಾಗು.

ಅರಳುವ ಹುವೂಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ
ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನೀ ಅಳುಕದಿರು, ಮಳೆಯೋ ಬರಸಿಡಿಲೋ ನೀ ನಡೆಯುತಿರು.




ಚಿತ್ರ : ಯಶವಂತ್ (2005)
ಸಾಹಿತ್ಯ : ಕವಿರಾಜ್ಸಂ
ಗೀತ : ಮಣಿಶರ್ಮ
ಗಾಯನ : ರಾಜೇಶ್, ನಂದಿತಾ

ಹೆಣ್ಣು : ಮೊದ ಮೊದಲು ಭುವಿಗಿಳಿದಾ ಮಳೆ ಹನಿಯು ನೀನೇನಾಹೂವೆದೆಯಾ ಚುಂಬಿಸಿದಾ ಇಬ್ಬನಿಯು ನೀನೇನಾಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ ಎದುರಲ್ಲಿಇದ್ದೆಯೊ ಯಾವೂರಲ್ಲಿ ನೀನವಿತು ಕುಳಿತು

ಗಂಡು : ಅಲ್ಲ ಮಳೆ ಹನಿಯಲ್ಲ ನಾನು ಹಿಂಗೋದಿಲ್ಲಅಲ್ಲ ಇಬ್ಬನಿಯಲ್ಲ ನಾನು ಆರೋದಿಲ್ಲಬಲು ಸೀದ ಬಲು ಸಾದ ಹುಡುಗ ಕಣೇ ಇವನು ನಾನು ಬಾರದೆ ನಿನ್ನ ಕನಸಲ್ಲಿ ಕಾಣದೆ ನಿನ್ನ ಎದುರಲ್ಲಿಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ

ಹೆಣ್ಣು : ಅಮ್ಮನ ಪ್ರೀತಿ ಹೇಗೆ ಎಂದು ನಾ ಕಂಡಿಲ್ಲ ಕ್ಷಣ ಕೂಡವುಅಮ್ಮನ ರೀತಿ ನಿನ್ನ ಪ್ರೀತಿಯು ಅಂತಲ್ಲ ಮನಸೆಲ್ಲವು

ಗಂಡು : ಕೋಟಿ ದೇವರು ಕೂಡಿ ಕೊಟ್ಟರು ಸಾಟಿ ಆಗದು ತಾಯಿಗೆಅಂಥ ಪ್ರೀತಿಯ ನನ್ನಂಗಂತೀಯ ಸುಳ್ಳು ಹೇಳ್ತೀಯಾಏಕೆ ಹುಡುಗಿಯೆ

ಹೆಣ್ಣು : ಮೊದ ಮೊದಲು ಭುವಿಗಿಳಿದಾ ಮಳೆ ಹನಿಯು ನೀನೇನಾಹೂವೆದೆಯಾ ಚುಂಬಿಸಿದಾ ಇಬ್ಬನಿಯು ನೀನೇನಾಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ ಎದುರಲ್ಲಿಇದ್ದೆಯೊ ಯಾವೂರಲ್ಲಿ ನೀನವಿತು ಕುಳಿತು

ಗಂಡು : ಅಲ್ಲ ಮಳೆ ಹನಿಯಲ್ಲ ನಾನು ಹಿಂಗೋದಿಲ್ಲಅಲ್ಲ ಇಬ್ಬನಿಯಲ್ಲ ನಾನು ಆರೋದಿಲ್ಲಬಲು ಸೀದ ಬಲು ಸಾದ ಹುಡುಗ ಕಣೇ ಇವನು ನಾನು ಬಾರದೆ ನಿನ್ನ ಕನಸಲ್ಲಿ ಕಾಣದೆ ನಿನ್ನ ಎದುರಲ್ಲಿಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ

ಹೆಣ್ಣು : ಆ ತಂಗಾಳೆ ತೀಡೋ ರೀತಿ ನಾ ಹೇಗೆಂದು ತಿಳಿದಿಲ್ಲವೋನಿನ್ನಯ ಸ್ಪರ್ಶ ತಂದ ಹರ್ಷದ ಹಾಗಂತು ನನ್ನ ಹೃದಯವು

ಗಂಡು : ಸುಮ್ಮನೇತಕೆ ತಂಪು ಗಾಳಿಗೆ ನನ್ನ ಹೋಲಿಕೆ ಮಾಡುವೆಸುಂಟರ ಗಾಳಿಗೆ ಮಾಡು ಹೋಲಿಕೆ ಆಗ ಒಪ್ಪಿಗೆ ನಾನು ನೀಡುವೆ

ಹೆಣ್ಣು : ಮೊದ ಮೊದಲು ಭುವಿಗಿಳಿದಾ ಮಳೆ ಹನಿಯು ನೀನೇನಾಹೂವೆದೆಯಾ ಚುಂಬಿಸಿದಾ ಇಬ್ಬನಿಯು ನೀನೇನಾಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ ಎದುರಲ್ಲಿಇದ್ದೆಯೊ ಯಾವೂರಲ್ಲಿ ನೀನವಿತು ಕುಳಿತು

ಗಂಡು : ಅಲ್ಲ ಮಳೆ ಹನಿಯಲ್ಲ ನಾನು ಹಿಂಗೋದಿಲ್ಲಅಲ್ಲ ಇಬ್ಬನಿಯಲ್ಲ ನಾನು ಆರೋದಿಲ್ಲಬಲು ಸೀದ ಬಲು ಸಾದ ಹುಡುಗ ಕಣೇ ಇವನು ನಾನು ಬಾರದೆ ನಿನ್ನ ಕನಸಲ್ಲಿ ಕಾಣದೆ ನಿನ್ನ ಎದುರಲ್ಲಿಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ


ಚಿತ್ರ : ಸುಂಟರಗಾಳಿ (2006)
ಸಂಗೀತ : ಸಾಧು ಕೋಕಿಲ

ಸಾಹಿತ್ಯ : ರಂಗನಾಥ್ಗ
ಗಾಯನ : ಕುನಾಲ್ ಗಾಂಜಾವಾಲ ಮತ್ತು ಚಿತ್ರ

ಗಂಡು : ನಿನ್ನಾಣೆ ನಿನ್ನಾಣೆಪ್ರೀತಿ ದೇವತೆ ನಿನ್ನಾಣೆನೀನಿಲ್ದೆ ನಾನಿಲ್ಲ ದೇವರಾಣೆನಿನ್ನಾಣೆ ನಿನ್ನಾಣೆಪ್ರೀತಿ ದೇವತೆ ನಿನ್ನಾಣೆಈ ಜೀವ ಎಂದೆಂದು ನಿನ್ನದೇನೆ

ಹೆಣ್ಣು : ಗೆಳೆಯ ನನಗೂನು ನೀನೊಬನ್ನೆನಿನ್ನ ಹೃದಯಾನೆ ನನ್ನ ಮನೆಕೊಟಿ ದೇವರ ನಾ ಕಾಣೆ ಪ್ರೀತಿ ದೇವರ ಮೇಲಾಣೆ

ಗಂಡು : ಎಲ್ಲ ದೇವರ ಮೂಲಾನುಪ್ರೀತಿ ಮಂತ್ರ ತಾನೆ

ಗಂಡು : ನಿನ್ನಾಣೆ ನಿನ್ನಾಣೆಪ್ರೀತಿ ದೇವತೆ ನಿನ್ನಾಣೆನೀನಿಲ್ದೆ ನಾನಿಲ್ಲ ದೇವರಾಣೆ

ಹೆಣ್ಣು : ಹಾ! ಈ ಪ್ರೀತಿಯ ರಥದಲ್ಲಿಹೊರಡೊ ಮೆರವಣಿಗೇಲಿ ನಮ್ಮಿಬರಿಗೆ ತಾನೆ ಅವಕಾಶ

ಗಂಡು : ಈ ಪ್ರೀತಿಯ ಪುಟದಲ್ಲಿಬರೆಯೊ ಬರವಣಿಗೇಲಿ ನಮ್ಮಿಬರದೆ ತಾನೆ ಇತಿಹಾಸ

ಹೆಣ್ಣು : ಪ್ರೀತಿಯಂದರೆ ಈಗೆನೆ ಕಾಲ ಎನ್ನುವ ಕಾಲನೆಗಂಡು : ಬಿಟ್ಟು ಬಾಲುವುದು ಗೊತ್ತೇನೆ ಲೋಕ ಎನ್ನುವ ಲೋಕಾನೆ

ಗಂಡು : ನಿನ್ನಾಣೆ ನಿನ್ನಾಣೆಪ್ರೀತಿ ದೇವತೆ ನಿನ್ನಾಣೆನೀನಿಲ್ದೆ ನಾನಿಲ್ಲ ದೇವರಾಣೆ

ಗಂಡು : ಹಾರೋ ಹಕ್ಕಿನೆ ಹರಿದಾಡೊ ಹೊಳೆಯನ್ನೆಕವಿತೇಲಿ ಕಟ್ಟಿ ಹಾಕೊದ್ ಪ್ರೀತಿನೇ

ಹೆಣ್ಣು : ತೇಲೊ ಮೊಡಾನೆ ಕರಗಿ ಬೀಳೊ ಮಳೆಯನ್ನೆಮುತ್ತಿಸುತ್ತ ಭೂಮಿ ಮಾಡೊದು ಪ್ರೀತಿನೇ

ಗಂಡು : ಗುರುವಿಲ್ಲದಿದ್ದರು ಕಲಿಯೋದುಗುರಿ ಇಲ್ಲದಿದ್ದರು ಚಲಿಸೋದುಅರಿವಿಲ್ಲದೆ ಸೆಳೆಯೋ ಸೆಳೆತ ಈ ಪ್ರೇಮ

ಹೆಣ್ಣು : ಜಪವಲದಿದ್ದರು ಬೇಡೊದುಜ್ವರವಲದಿದ್ದರು ಕಾಡೊದುಸ್ವರವಿಲದಿದ್ದರು ಹಾಡೊ ಹಾಡು ಈ ಪ್ರೇಮ

ಹೆಣ್ಣು : ಕಾಣದಿದ್ದರುಗಂಡು : ಕೇಳದಿದ್ದರುಹೆಣ್ಣು ಮತ್ತು ಗಂಡು : ಕಾಣದಿದ್ದರು ಕೇಳದಿದ್ದರು ಜೀವಂತ ಈ ಪ್ರೇಮ

ಗಂಡು : ನಿನ್ನಾಣೆ ನಿನ್ನಾಣೆಪ್ರೀತಿ ದೇವತೆ ನಿನ್ನಾಣೆನೀನಿಲ್ದೆ ನಾನಿಲ್ಲ ದೇವರಾಣೆನಿನ್ನಾಣೆ ನಿನ್ನಾಣೆಪ್ರೀತಿ ದೇವತೆ ನಿನ್ನಾಣೆಈ ಜೀವ ಎಂದೆಂದು ನಿನ್ನದೇನೆ

ಹೆಣ್ಣು : ಗೆಳೆಯ ನನಗೂನು ನೀನೊಬನ್ನೆನಿನ್ನ ಹೃದಯಾನೆ ನನ್ನ ಮನೆಹೆಣ್ಣು : ಪ್ರೀತಿಯಂದರೆ ಈಗೆನೆ ಕಾಲ ಎನ್ನುವ ಕಾಲನೆ

ಗಂಡು : ಬಿಟ್ಟು ಬಾಲುವುದು ಗೊತ್ತೇನೆ ಲೋಕ ಎನ್ನುವ ಲೋಕಾನೆ



ಚಿತ್ರ : ಹುಡುಗಾಟ (2007)
ಸ೦ಗೀತ : ಜೆಸ್ಸಿ

ಗಾಯನ : ಶಾನ್, ಶ್ರೇಯಾ

ಏನೋ ಒ೦ಥರಾ ಏನೋ ಒ೦ಥರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನ೦ತರ ೨
ಹೇಗೋ ಇದ್ದೆ ನಾ ಹೇಗೋ ಆದೆ ನಾ
ಮರೆತೋಯ್ತು ನನಗೆಲ್ಲ ನಿ೦ದೆ ಗು೦ಗಲ್ಲಿ
ಇ೦ಥಾ ಈ ದಿನ ಇ೦ಥಾ ಈ ಕ್ಷಣಹೀಗೇನೆ ಇರಬೇಕು ಎ೦ದೂ ಬಾಳಲ್ಲಿ

ಏನೋ ಒ೦ಥರಾ ಏನೋ ಒ೦ಥರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನ೦ತರ ||೨||
ಹೇಗೋ ಇದ್ದೆ ನಾ ಹೇಗೋ ಆದೆ ನಾ
ಮರೆತೋಯ್ತು ನನಗೆಲ್ಲ ನಿ೦ದೆ ಗು೦ಗಲ್ಲಿ
ಇ೦ಥಾ ಈ ದಿನ ಇ೦ಥಾ ಈ ಕ್ಷಣ
ಹೀಗೇನೆ ಇರಬೇಕು ಎ೦ದೂ ಬಾಳಲ್ಲಿ

ಏನೋ ಒ೦ಥರಾ ಏನೋ ಒ೦ಥರಾ ಈ ಪ್ರೀತಿಯು
ಈ ರೀತಿಯು ಶುರುವಾದ ಆನ೦ತರ

ನಿನ ನೆನಪಲೆ ಮೈಮರೆಯುವೆ ಅದು ಎಲ್ಲಿಯೆ ನಾನಿದ್ದರೂ
ನಿನ್ನ ಹೆಸರನೆ ನಾ ಬರೆಯುವೆ ಅದು ಏನನ್ನೆ ನಾ ಬರೆಯ ಹೋದರೂ
ಕಳವಳ... ತಳಮಳ...
ನೀ ದೂರಾ ಹೋದಾ ಕ್ಷಣ ನಾನಿಲ್ಲ ಆ ತಕ್ಷಣ ನಿನದೇನೆ ಈ ಜೀವನ

ಏನೋ ಒ೦ಥರಾ ಏನೋ ಒ೦ಥರಾ ಈ ಪ್ರೀತಿಯು
ಈ ರೀತಿಯು ಶುರುವಾದ ಆನ೦ತರ

ಮು೦ಜಾನೆಯೊ ಮುಸ್ಸ೦ಜೆಯೊ ನೀನಿದ್ದಾಗ ಆನ೦ದವೋ
ಮಾತಾಗಲಿ ಹಾಡಾಗಲಿ ನಿನ್ನ ದನಿಯಿ೦ದ ಎಲ್ಲಾನು ಚ೦ದವು
ಸುಮಧುರ... ಸಡಗರ...
ಜೊತೆಯಾಗಿ ನೀನಿದ್ದರೆ ಬದುಕಾಗಿ ನೀ ಬ೦ದರೆ ಭುವಿಯೆ ಆ ಸ್ವರ್ಗವು

ಏನೋ ಒ೦ಥರಾ ಏನೋ ಒ೦ಥರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನ೦ತರ
ಹೇಗೋ ಇದ್ದೆ ನಾ ಹೇಗೋ ಆದೆ ನಾ
ಮರೆತೋಯ್ತು ನನಗೆಲ್ಲ ನಿ೦ದೆ ಗು೦ಗಲ್ಲಿ
ಇ೦ಥಾ ಈ ದಿನ ಇ೦ಥಾ ಈ ಕ್ಷಣ
ಹೀಗೇನೆ ಇರಬೇಕು ಎ೦ದೂ ಈ ಬಾಳಲ್ಲಿ

ಏನೋ ಒ೦ಥರಾ ಏನೋ ಒ೦ಥರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನ೦ತರ


ಚಿತ್ರ : ಹುಡುಗಾಟ (2007)
ಸ೦ಗೀತ : ಜೆಸ್ಸಿ
ಗಾಯಕರು : ಜಸ್ಸಿ ಗಿಫ್ಟ್, ವಸುಂಧರ ದಾಸ್

ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ
ಹೋದ ಕಡೆ ಬಂದ ಕಡೆ ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ ಇಂದು ನಿನ್ನ ಕಂಡು
ಕದ್ದು ಕದ್ದು ನೋಡ್ತಾರೆ
ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು ಸುಮ್ನೆ ಹೋಗನೆಂದು

ಅರೆ, ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ

ಸಹ್ಯಾದ್ರಿ ಸಾಲಲಿ ಸೊಂಪಾದ ಕಾಡಲಿ
ತಿಂಡುಂದು ಕೊಬ್ಬಿದಂತ ಜಿಂಕೆನ್ಯಾರು ಹಿಡಿದರೊ
ಮತ್ತೇಕೆ ತಂದು ಹಿಂಗೆ ರೋಡಿನಲ್ಲಿ ಬಿಟ್ಟರೊ
ಈ ಮಾಯ ಜಿಂಕೆಯ ಮುಟ್ಟೊಕೆ ಆಸೆಯ
ಹಿಡಿಯೋಕೆ ಬಂದ್ರೆ ನೀನೆ ಬಲೆಗೆ ಬಿದ್ದು ಬಿಟ್ಟಿಯ
ಚಂದವು ಜಾಸ್ತಿಯು
ಅದೆ ನನ್ನ ಆಸ್ತಿಯು
ಏನೆ ಆದರೂನು ನೀನು ಮಸ್ತು ಮಸ್ತು ಬೊಂಬೆಯು

ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ

ಒಂದ್ಸೊಲ್ಪ ಬೆಂಕಿನಾ ಒಂದ್ಸೊಲ್ಪ ಬೆಣ್ಣೆನಾ
ಒಟ್ಟಾಗಿ ರುಬ್ಬಿ ಬ್ರಹ್ಮ ನಿನ್ನ ಮಯ್ಯ ಮಾಡಿದ
ಅಬ್ಬಬ್ಬಾ ನಿಜಕು ರಸಿಕ ಆ ಕಲಾವಿದ
ಇಂದ್ರಾನು ಬೇಡಿದ ಚಂದ್ರಾನು ಕಾಡಿದ
ಅವ್ರ್ಯಾರು ಬೇಡ ಅಂದೆ ಆಗ ನಿಂಗೆ ನೀಡಿದ
ಎಂಥಹ ಭಾಗ್ಯವೊ
ನೀನೆ ಯೋಗ್ಯವೊ
ಅಂಕೆ ಮೀರಿ ಆಡಬ್ಯಾಡ ಯಾಕೊ ಶಂಕೆ ಬರುತಿದೆ

ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ
ಹೋದ ಕಡೆ ಬಂದ ಕಡೆ ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ ಇಂದು ನಿನ್ನ ಕಂಡು
ಕದ್ದು ಕದ್ದು ನೋಡ್ತಾರೆ
ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು ಸುಮ್ನೆ ಹೋಗನೆಂದು

ಅರೆ, ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ



ಚಿತ್ರ : ಹೊಂಬಿಸಿಲು (1978)
ಸಂಗೀತ : ರಾಜನ್ ನಾಗೇಂದ್ರ

ಗಾಯನ : ಎಸ್ ಪಿ ಬಿ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ
ನನ್ನ ಬಿಟ್ಟು ನಿನ್ನ
ಜೀವನ ಸಾಗದು
ಜೀವನ ಸಾಗದು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು

ನೀರ ....

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದಿರಿಲ್ಲಿ ನಾನು ನಿನ್ನ ಕೈ ಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದಿರಿಲ್ಲಿ ನಾನು ನಿನ್ನ ಕೈ ಸೆರೆ
ಕೂಡಿ ನಲಿವ ಆಸೆ ಮನದಿ ಕಾದಿದೆ
ಹಿತವು ಎಲ್ಲಿ ನಾವು ಬೇರೆ ಆದರೆ
ಹಿತವು ಎಲ್ಲಿ ನಾವು ಬೇರೆ ಆದರೆ

ನೀರ ....

ಸಂಗೀತ: ರಾಜನ್ ನಾಗೇಂದ್ರ
ಗಾಯಕರು: ಎಸ್ ಪಿ ಬಿ, ಎಸ್ ಜಾನಕಿ

ಹೆಣ್ಣು: ಅಹಹ್ಹಹಾಮಾಗಿಯಾ ಚಳಿಯಲ್ಲಿ ಈ ಬಿಸಿ ಏಕೋ

ಗಂಡು: ಮಾಗಿದ ಮೈಯಲ್ಲಿ ಮಿಂಚಿದು ಏಕೋ

ಹೆಣ್ಣು: ಒಂದಾದ ನಮ್ಮಲಿ ನೂರಾಸೆ ಕಣ್ಣಲಿ

ಗಂಡು: ಅಹಾ ಒಂದಾದ ನಮ್ಮಲಿ ನೂರಾಸೆ ಕಣ್ಣಲಿ

ಹೆಣ್ಣು: ಇಣಿಕಿದೆ ಕೆಣಕಿದೆ ಕುಣಿದಿದೆ ಅಹ್ಹಾ

ಗಂಡು: ಇಣಿಕಿದೆ ಕೆಣಕಿದೆ ಕುಣಿದಿದೆ ಅಬ್ಬಬ್ಬಬ್ಬಾ

ಹೆಣ್ಣು: ತಂದಾಗ ಈ ನಮ್ಮ ಸ್ನೇಹಒಂದಾಗಿ ಅಪ್ಪುವ ಮೋಹ

ಗಂಡು: ನಿನಗಾಗಿ ಸೋತಿದೆ ದೇಹಎಂದೆಂದು ತೀರದೀ ದಾಹ

ಹೆಣ್ಣು: ಸಂಯಮವೆಲ್ಲಿ ಸಂಗಮದಲ್ಲಿ

ಗಂಡು: ಸ್ವರ್ಗವು ಇಲ್ಲಿ ಸಂಭ್ರಮದಲ್ಲಿ

ಹೆಣ್ಣು: ಆ ಲಲಲಲಲಲಲಲಲಲಲಲಲಲಾಆಆಆ ಮಾಗಿಯ ಚಳಿಯಲ್ಲಿ .........

ಗಂಡು: ಕಡಲಲ್ಲಿ ತಲ್ಲಣವೇಕೋಕಡೆ ಸೇರೊ ಆತುರವೇನೋ

ಹೆಣ್ಣು: ಒಡಲಲ್ಲಿ ಕಂಪನವೇಕೋಜೊತೆ ಸೇರೊ ಕಾತುರವೇನೋ

ಗಂಡು: ಹರೆಯದ ಬಯಕೆ ಅಂಕೆಯು ಬೇಕೆ

ಹೆಣ್ಣು: ಬೆರೆಯುವ ಮನಕೆ ಅಂಜಿಕೆ ಏಕೆ

ಗಂಡು: ಓ ರರರರರರರರರರರರರರರರಾ ಹಾ

ಹೆಣ್ಣು: ಲಲಲಲಲಲಾಆಆಆ

ಗಂಡು: ಆ ಲಲಲಲಲಲಾಆಆಆ ಅಹಹಾ ಮಾಗಿಯಾ ಚಳಿಯಲ್ಲಿ ........


ಚಿತ್ರ : ಹೊಂಬಿಸಿಲು
ಸಾಹಿತ್ಯ : ಗೀತಪ್ರಿಯ
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ

ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶ

ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಮಿಡಿಯುವ ಮನಗಳು ಎರಡು
ಮಿಡಿತದ ರಾಗವು ಒಂದೇ
ಮಿಂಚುವ ಕಣ್ಣಂಚಿನ ಸಂಚೂ ಇಂದು ಒಂದೇ
ತಪಿಸುವ ಹೃದಯಗಳೆರಡು
ತಾಪದ ವೇಗವು ಒಂದೇ
ಸೇರುವ ಶುಭ ಸಮಯದಿ ವಿರಹಾ ಇರದು ಮುಂದೆ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ

ಒಲವಿನ ಬಯಕೆಯು ಅಂದು
ಮಿಲನ ಮಹೋತ್ಸವವಿಂದು
ರಚಿಸುವ ನಾವ್ ಅನುದಿನ ಮುದದಾ ಪ್ರೇಮ ಕವನ
ಕನಸಿನ ರಾತ್ರಿಯು ಕಳೆದು
ಬಂದಿರೆ ನೆನಿಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದಾ ಸೂರ್ಯ ಕಿರಣ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ

ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶ

ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ


ಚಿತ್ರ :ಹೊಸ ಜೀವನ (1990
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ
ಗಾಯನ : ಕೆ .ಜೆ. ಯೇಸುದಾಸ್, ಚಂದ್ರಿಕಾ ಗುರುರಾಜ್


[ಹೆಣ್ಣು]
ಉಳ್. ಳ್ ಳ್ ಳ್... ಆಯಿ ಆಯಿ.....

ಮೇಲೆ ನೋಡೊ ಕಂದ
ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ
ನಿದ್ದೆ ಗುಮ್ಮ ಬರ್ತಾನೆ
ಉಳ್.. ಳ್ ಳ್ ಳ್.... ಆಯಿ ಆಯಿ.....

[ಗಂಡು]
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ

ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ

ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿ ಹೋಯ್ತು
ಈ ಮನಸೇ ಕಲ್ಲಾಗಿ ಹೋಯ್ತು

ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..

ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..

ತಿಂದೋರು ಎಲೆಯ ಬಿಸಾಡೋ ಹಾಗೆ
ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ
ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ
ಕೇಳೋ ದೇವನೇ ೧

ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?

ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?

ಭೂಮಿಯ ತುಂಬ ಅನಾಥರೆಂಬ
ಕೋಟ್ಯಾನುಕೋಟಿ ಕೂಗು ಇದೆ
ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ
ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ
ಹೇಳೋ ದೇವನೇ ೨

ಚಿತ್ರ :ಹೊಸಬೆಳಕು (1982)
ಸಾಹಿತ್ಯ: ಚಿ| ಉದಯಶಂಕರ್
ಸಂಗೀತ: ಎಮ್. ರಂಗರಾವ್
ಗಾಯಕರು: ಎಸ್. ಜಾನಕಿ ಮತ್ತು ಡಾ| ರಾಜ್ ಕುಮಾರ್


[ಹೆಣ್ಣು]
ರವಿsss ರವಿ ರವಿ ರವಿ
ರವಿsss ರವಿ ರವಿ ರವಿ

ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
|| ರವಿ ||

[ಗಂಡು]
ಹಾ ಹಾ ಹಾ ಹಾ ಹಾ ಲಲಲ ಲ ಲ ಲ ಲಾss

[ಹೆಣ್ಣು]
ಕಡಲಿಂದ ನೀರನು ತರುವೆ
ಮಳೆಯಂತೆ ಭೂಮಿಗೆ ಸುರಿವೆ
ನೆಲದಲ್ಲಿ ಹಸಿರನು ತುಂಬಿ
ಸಂತೋಶ ಸಂಭ್ರಮ ಕೊಡುವೆ

[ಗಂಡು]
ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ
ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ

[ಹೆಣ್ಣು]
|| ರವಿ ||

ರವಿ ನಿನ್ನ ಕಾಂತಿಯ ಜೀವ
ನೀ ನನ್ನ ಬಾಳಿನ ದೈವ
ನೀ ದೂರವಾದರೆ ಹೀಗೆ
ನಾ ತಾಳಲಾರೆನು ನೋವ

[ಗಂಡು]
ಈ ನನ್ನ ಪ್ರೇಮದ ಹೂವ ನಾ ಮರೆವೆನೇ
ಈ ನನ್ನ ಪ್ರೇಮದ ಹೂವ ನಾ ಮರೆವೆನೇ

[ಹೆಣ್ಣು]
|| ರವಿ ||

[ಗಂಡು]
ಹಾ ಹಾ ಹಾ ಹಾ ಹಾ ಲಲಲ ಲ ಲ ಲ ಲಾss

[ಹೆಣ್ಣು]
ಹಾ ಲ ಲ ಲ ಲ ಅಹಹ ಲ ಲ ಲ ಲಾss


ಚಿತ್ರ :ಹೊಸಬೆಳಕು (1982)
ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ , ವಾಣಿ ಜಯರಾಮ್
ರಾಗ: ಶ್ಯಾಂ ಕಲ್ಯಾಣ್ (ಹಿಂದುಸ್ತಾನಿ)
ಸಮಯ: ಸಂಧ್ಯಾ ಕಾಲ


ಆ.....
ತೆರೆದಿದೆ ಮನೆ ಓ ಬಾ ಅತಿಥಿ

ಆ......
ತೆರೆದಿದೆ ಮನೆ ಓ ಬಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
|| ತೆರೆದಿದೆ ||

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ
|| ತೆರೆದಿದೆ ||

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ
|| ತೆರೆದಿದೆ ||
ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ
|| ತೆರೆದಿದೆ ||
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ ಅತಿಥಿ

"Magical Template" designed by Blogger Buster