Thursday, October 18, 2007

ಚಿತ್ರ: ಅನಂತನ ಅವಾಂತರ (1989)
ಸಾಹಿತ್ಯ : ಹಂಸಲೇಖ/ವಿ.ಮನೋಹರ್/ಉಪೇಂದ್ರ
ಸಂಗೀತ : ಹಂಸಲೇಖ
ಗಾಯನ : ರಾಜ್‍ಕುಮಾರ್ ಭಾರತಿ, ಕಾಶೀನಾಥ್, ಶಾಂತಮ್ಮ, ಎಂ.ಎನ್.ಲಕ್ಷ್ಮೀದೇವಿ, ಅರವಿಂದ್, ಸುಧೀಂದ್ರ ಇತರರು


[ಗಂಡು] : ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ಮದುವೆಯಾಗೊವರೆಗು ಈ ಹುಚ್ಚು ಹೋಗಲ್ಲ
ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೊಡಿ

ಹೀಗೇನೆ ಇರಬೇಕೆಂಬ ಕಾನೂನಿಲ್ಲ
ದುಡಿಯೋ ಹೆಣ್ಣೆ ಬೇಕು ಅನ್ನೋನಲ್ಲ
ರೂಪ ಇದ್ರೆ ಸಾಕು ರೂಪಾಯಿ ಕೇಳೋನಲ್ಲ
ನಡತೆ ಇದ್ರೆ ಸಾಕು ಈ ಅಡುಗೆ ನಡುಗೆ ನೋಡೊನಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೊಡಿ

[ಕೊರಸ್] : ಓ ಹು ಹೋ ಹು ಹೋ ಹು....

[ಗಂಡು] : ಯಾಕೆ ಮಿಸ್ ಏನಾದ್ರು ನೋವಾಯ್ತ
[ಕೊರಸ್] : ಏನ್ ಗುರು ಪಾರ್ವಾಳ ಸೆಟಾಯ್ತ
[ಗಂಡು] : ಹೇ ಹೋಗ್ರೋ ಲೋ ಕಾಲೇಜ್ ಗೆ ಹೊತ್ತಾಯ್ತು
[ಕೊರಸ್] : ನೀವು ಹೋಗೋದು ಮ್ಯಾಟ್ನೀಗೆ ಗೊತಾಯ್ತು
[ಹೆಣ್ಣು] : ದಯಮಾಡಿ ಮನೆ ತನಕ ಬಿಡ್ತೀರ
[ಕೊರಸ್] : ಆಹಾ ಯಾರಾದ್ರು ಇಂತ ಚಾನ್ಸು ಬಿಡ್ತಾರ

[ಹೆಣ್ಣು] : ಅಯ್ಯಯ್ಯೊ ಮೊಮ್ಮಗಳೆ ಎನಾಯ್ತು
[ಹೆಣ್ಣು] : ದಾರಿಲಿ ಆಕ್ಸಿಡೆಂಟ್ ಆಗೊಯ್ತು
[ಗಂಡು] : ಇವನೇನ ಇಂತ ಕೆಲಸ ಮಾಡಿದ್ದು
[ಹೆಣ್ಣು] : ಹಂಗಾದ್ರೆ ಎದ್ದೇಳ್ ಬಾರದು ಅಂಗುದ್ದು
[ಗಂಡು] : ಟಡಟಡ ಡಾಟಡ
ಟಡಟಡ ಡಾಟಡ ಯಾ ತಗೋ

[ಕೊರಸ್] : ಭೂಮಿಗೆ ಬಂದಂತ ಮೇನಕೆ
ಆಫೀಸ್ ಗೆ ಬಂದದ್ದು ಯಾತಕೆ
[ಹೆಣ್ಣು] : ಪ್ರೀತಿಯ ಫೈಲನ್ನ ತೋರ್ಸೊಕೆ
ಮುತ್ತಿನ ಸಹಿಯನ್ನ ಪಡೆಯೋಕೆ
[ಹೆಣ್ಣು ಮತ್ತು ಗಂಡು] : ಲಾ ಲ ಲ ಲಾ ಲ ಲ ಲ ಲ ಲಾ
[ಗಂಡು] : ಅಯ್ಯೊ ಆಫೀಸೆ ಕಬ್ಬಿನಂಗಡಿ ಆಗೊಯ್ತ

[ಹೆಣ್ಣು] : ಎನಪ್ಪ ನಿನ್ ಕತೆ ಏನಪ್ಪ
[ಗಂಡು] : ಎನಪ್ಪ ನಿನ್ ಕತೆ ಏನಪ್ಪ
[ಹೆಣ್ಣು] : ನಿನ್ಗ್ಯಾಕೋ ಬಂತು ಇಂತ ಕೆಟ್ ಬುದ್ದಿ
[ಗಂಡು] : ನಿನ್ಗ್ಯಾಕೋ ಬಂತು ಇಂತ ಕೆಟ್ ಬುದ್ದಿ
[ಹೆಣ್ಣು] : ಟೈಪಿಸ್ಟು ಬಂದ್ಲಂತೆ ನಿನ್ ಪಕ್ದಲ್ ನಿಂತಳಂತೆ
ಮೈಮೇಲೆ ಬಿದ್ಲಂತೆ ಏನೇನೋ ಕೊಟ್ಳಂತೆ
[ಗಂಡು] : ನನ್ನ ಮುದ್ದು ಅಮ್ಮ ತಲೆ ಕೆಡಸಿಕೊಳ್ಳಬೇಡ
ನಾನು ನೋಡೊ ಹೆಣ್ಣ ನೀ ಬೇಡ ಅನ್ನ ಬೇಡ ತಾಯಿ
ಜೋಡಿ ಜೋಡಿ ತರ್ತೀನಿ ಒಳ್ಳೆ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೋಡಿ

[ಕೊರಸ್] : ಮೇರೆ ಸಪುನೊಂಕಿ ರಾಣಿ ಕಬ್ ಆಯೆಗಿ ತು
ಈ ಆಂಜನೇಯನ್ ದೇವೆಸ್ತಾನ ಲಾಲ್ ಬಾಗ್ ಆಯ್ತು
ಇಲ್ಲಿ ಹುಡುಗ ಹುಡುಗಿ ಸೇರೋದ್ ನೊಡಿ ಸಾಕಾಗ್ ಹೋಯ್ತು
ಮಾರುತಿ ಏನು ಮಾರುತಿ
ನೋಡುತಿ ಸುಮ್ನೆ ಕೂರುತಿ

[ಗಂಡು] : ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
[ಹೆಣ್ಣು] : ಮದುವೆಯಾಗೊವರೆಗು ಈ ಹುಚ್ಚು ಹೋಗಲ್ಲ
[ಗಂಡು] : ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ
ಬಾರೆ ಅಮ್ಮ ನನ್ ಜೋಡಿ ನಾಳೆ ನೋಡು
ಮುಂದೆ ನಿಂತು ಮದುವೆಯ ನಿಶ್ಚಯ ಮಾಡು

[ಹೆಣ್ಣು] : ಯಜಮಾನ ಏನಿದು ಅವಮಾನ
[ಗಂಡು] : ಯಜಮಾನಿ ನನಗೊಂದು ಅನುಮಾನ
[ಹೆಣ್ಣು] : ಅದು ಯಾವ ರಾಗ ಆಡಿ ಬೇಗ
[ಗಂಡು] : ನಿಶ್ಚಿತಾರ್ಥ ಈಗ ನಿಮ್ ಅಮ್ಮಂಗ

[ಹೆಣ್ಣು] : ಮೇನಕೆ ಮೇನಕೆ ಮೇನಕೆ ಹೋ
[ಹೆಣ್ಣು] : ಇವರದ್ಯಾವ ಕುಲ ಗೋತ್ರ ತಿಳ್ಕೊಂಡ್ಯೆನೋ
[ಗಂಡು] : ಜಾತಿ ಗೀತಿ ಕುಲ ಗೋತ್ರ ಇನ್ಮೇಲ್ ನೊ ನೊ
[ಗಂಡು] : ಹುಡುಗಿ ಬರ್ತಾ ಇದೆ
[ಹೆಣ್ಣು] : ಏನೊ ಏನೊ ಏನೊ ಇದು ಒಳ್ಳೆ ಜೋಡಿನೇನೊ
[ಗಂಡು] : ಹುಡುಗಿ ಬರ್ತಾ ಇದೆ
[ಹೆಣ್ಣು] : ಅಯ್ಯೊ ರಾಮ ಕೃಷ್ಣ ಇದು ಎಂತ ಕರ್ಮನೋ
[ಗಂಡು] : ಹುಡುಗಿ ಬರ್ತಾ ಇದೆ

[ಹೆಣ್ಣು] : ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ದುಡ್ಡು ಕಾಸು ಖರ್ಚು ಏನೇನು ಬೇಡ ಬೇಡ
[ಗಂಡು] : ಛತ್ರ ಚಪ್ಪರ ಊಟ ಆ ಡಂಭಾಚಾರ ಬೇಡ ಬೇಡ

[ಕೊರಸ್] : ಸಿಂಪಲ್ಲಾಗಿ ಮದುವೆಯ ಮಾಡಿ ನೊಡಿ
ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ
ಸಿಂಪಲ್ಲಾಗಿ ಮದುವೆಯ ಮಾಡಿ ನೊಡಿ
ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ

ಚಿತ್ರ: ಅಭಿ
ಹಾಡಿರುವವರು: ಉದಿತ್ ನಾರಾಯಣ್, ಮಹಾಲಕ್ಷ್ಮಿ ಅಯ್ಯರ್
ಸಾಹಿತ್ಯ: ಕೆ.ಕಲ್ಯಾಣ್
ಸಂಗೀತ: ಗುರುಕಿರಣ್


ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೇ
ಈ ಪ್ರೀತಿ, ನೀ ನನ್ನ ಪ್ರಾಣ ಕಣೆ

ನಂಗು ನಿಂಗು ಇನ್ನು ಹೊಸದು ಇಂಥ ಅನುಭವ
ಕಂಡು ಕಂಡು ಎದೆಯ ಒಳಗೆ ಏನೊ ಕಲರವ
ಸದಾ ಸದಾ ವಯ್ಯಾರದ ಪದ ಪದ ಬೆಸೆದಿದೆ
ಹೊಸ ಹೊಸ ಶೃಂಗಾರದ ರಸ ರಾಗ ಲಹರಿಯ ಹರಿಸುತ್ತಿದೆ
ಓ ಒಲವೆ ಒಲವೆಂಬ ಒಲವೆನ್ನಿರಿ
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೇ

ಪ್ರೀತಿ ಒಂದು ಗಾಳಿಯ ಹಾಗೆ ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ ನಿಂತ ನೀರಲ್ಲ
ಅದು ಒಂದು ಜ್ಯೋತಿಯ ಹಾಗೆ ಸುಡೋ ಸುಡೋ ಬೆಂಕಿಯಲ್ಲ
ಅದು ಒಂದು ಭುವಿಯ ಹಾಗೆ ನಿರಂತರ ಈ ಪ್ರೇಮ ಸ್ವರ
ಈ ಪ್ರೀತಿ ಆಕಾಶಕೂ ಎತ್ತರ
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೇ

ಅಮೃತವರ್ಷಿಣಿ (1996)

ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ||೨||
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು

ಗಗನದ ಸೂರ್ಯ ಮನೆಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ, ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ, ಅಲ್ಲಿ ನನ್ನ ಇಂಚರ ಅಮರ

ಚೆಲುವನೆ ನಿನ್ನ ಮುಗುಳುನಗೆ ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೊ ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮವೆ
ನನ್ನ ಎದೆಯಾಳೊ ಧಣಿ ನೀನೆ, ನಿನ್ನ ಸಹಚಾರಿಣಿ ನಾನೆ

ಅಮೇರಿಕಾ! ಅಮೇರಿಕಾ!! (1997)
ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮೂರ್ತಿ
ಹಾಡಿದವರು : ರಾಜೇಶ್, ಸಂಗೀತ


ನೂರೂ ಜನ್ಮಕೂ...
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ
ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...

ಬಾಳೆಂದರೇ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ
ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ

ನೂರೂ ಜನ್ಮಕೂ...

ಬಾ ಸಂಪಿಗೆ ಸವಿಭಾವಲಹರೀ ಹರಿಯೇ
ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ
ಲೋಕದಾ ಸುಖವೆಲ್ಲಾ
ನಿನಗಾಗಿ ಮುಡಿಪಿರಲೀ
ಇರುವಂಥ ನೂರು ಕಹೀ
ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ

ನೂರೂ ಜನ್ಮಕೂ...


ಅರಸು(2007)
ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ರಾಮ್ ನಾರಾಯಣ್
ಗಾಯನ : ಮಹಾಲಕ್ಷ್ಮಿ ಐಯ್ಯರ್



ಹೆಣ್ಣು : ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಬಾಳಲಿ ಹೊಂಬೆಳಕಿನ ಹೊಸ ಭಾವನೆ ತಂದೆ
ನನ ಈ ಬದುಕಲಿ ಹೊಸ ಪ್ರೀತಿಯ ಕಂಡೆ ಕಂಡೆ
ಈ ಜೀವವ ಸಂತೈಸಲು ಉಸಿರಾಗಿ ನೀ ಬಂದಾಗ
ನನ ಈ ಜೀವನ ಹಸಿರಾಯಿತು ಇಂದೆ ಇಂದೆ
ಕಣ್ಣೋಟ ಬೆರೆತಾಗ ನೀನಿಂತೆ ಮನದಲ್ಲಿ
ತುಟಿಯಲ್ಲಿ ನಗೆಯೊಂದ ಚೆಲ್ಲಿ ಚೆಲ್ಲಿ
ಈ ಮೌನ ಮಾತಾಗಿದೆ ಮಾತೆಲ್ಲಾ ಹಾಡಾಗಿದೆ
ಇಂಪಾದ ಹಾಡಲ್ಲಿ ನಾ ತೇಲಿ ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಚಂದ್ರನು ಬಾನಿಂದಲಿ ನನಗಾಗಿಯೇ ಬಂದ
ಮನ ತಂಪಾಗಲು ತಂಗಾಳಿಯ ತಂದ ತಂದ
ಅಪರೂಪದ ಅನುರಾಗದ ಆನಂದವು ನೀನಾದೆ
ನನ ಜೊತೆಯಾಗಲು ಮಿಂಚಂತೆ ನೀ ಬಂದೆ ಬಂದೆ
ನಲಿದಾಡಿತು ಈ ಮನಸು ಹೊಸಲೋಕ ಕಂಡಂತೆ
ನಿನಗಿಂದು ನಾ ಸೋತು ಹೋದೆ
ಈ ಸ್ನೇಹ ಎಲ್ಲಾಯ್ತೊ ಈ ಪ್ರೀತಿ ಹೇಗಾಯ್ತೊ
ನಿನ್ನಲ್ಲಿ ನನ್ನನ್ನು ನಾ ಮರೆತು ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ

No comments:

"Magical Template" designed by Blogger Buster